ಕೊಲೆ ಆರೋಪಿ ರೌಡಿ ಕಾಲಿಗೆ ಗುಂಡು ಹೊಡೆದ ಸರ್ಜಾಪುರ ಇನ್ಸ್ಫೆಕ್ಟರ್.
1 min read
ಬೆಂ,ಆನೇಕಲ್,ಫೆ,04 : ಸರ್ಜಾಪುರ ದೊಮ್ಮಸಂದ್ರ ಸಂತೆಯಲ್ಲಿ ಮಾಜಿ ರೌಡಿ ಶೀಟರ್ ಮುಸುರಿ ವೆಂಕಟೇಶನ ಕೊಲೆಯಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ರೌಡಿ ಶೀಟರ್ ಗುಬ್ಬಚ್ಚಿ ಶ್ರೀನಿವಾಸನ ಎಡಗಾಲಿಗೆ ಗುಂಡು ಹೊಡೆದ ಘಟನೆ ಬೆಳಗ್ಗೆ ನಡೆದಿದೆ.
ಬಂಧಿಸಲು ತೆರಳಿದ್ದ ಪೊಲೀಸ್ ಇರ್ಫಾನ್ ಕಲಾರಿ ಮೇಲೆ ಮೇಲೆ ರೌಡಿ ಶೀಟರ್ ಗುಬ್ಬಚ್ಚಿ ಸೀನ ಚಾಕುವಿನಿಂದ ಹಲ್ಲೆಯೆಸಗಿ ಪಾರಾಗಲು ಯತ್ನಿಸಿದ್ದ. ಸ್ಥಳಕ್ಕೆ ಧಾವಿಸಿದ ಇನ್ಸಫೆಕ್ಟರ್ ನವೀನ್ ಎಷ್ಟು ಹೇಳಿದರೂ ಕೇಳದ ಗುಬ್ಬಚ್ಚಿ ಶೀನ ಕೇಳದಾದಾಗ ಅನಿವಾರ್ಯವಾಗಿ ಕಾಲಿಗೆ ಗುಂಡು ಹೊಡೆಯಲಾಯಿತೆಂದು ಎಸ್ಪಿ ಸಿಕೆ ಬಾಬಾ ತಿಳಿಸಿದ್ದಾರೆ.
ಸರ್ಜಾಪುರದ ದೊಮ್ಮಸಂದ್ರದ ಬಳಿಯ ಸಂತೆ ಸಮೀಪದಲ್ಲಿ ಶೀನ ತೆರಳುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಬಂಧನಕ್ಕೆ ತೆರಳಿದಾಗ ಘಟನೆ ನಡೆದಿದೆ.
ಇಬ್ಬರು ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳು ಗುಬ್ಬಚ್ಚಿ ಶ್ರೀನಿವಾಸನನ್ನು ಪೊಲೀಸರ ಸುಪರ್ದಿಯಲ್ಲಿ ವಶಕ್ಕೆ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿವೈಎಸ್ಪಿ ಮೋಹನ್ ಕುಮಾರ್ ತಿಳಿಸಿದ್ದಾರೆ

