ಕಾವೇರಿ ಆಸ್ಪತ್ರೆಯಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಂಬುಲೆನ್ಸ್ ಕೊಡುಗೆ.
1 min read
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಆಗಮಿಸುವ ಪ್ರವಾಸಿಗರ ಹಾಗು ಉದ್ಯಾನವನದ ಸಿಬ್ಬಂದಿಗಳ ಪ್ರಯೋಜನಕ್ಕಾಗಿ ಇಂದು ವಿಕಾಸ ಸೌಧದ ಗಾಂಧಿ ಪ್ರತಿಮೆ ಬಳಿ ಕಾವೇರಿ ಆಸ್ಪತ್ರೆ ಸಮೂಹವು ಆಂಬ್ಯುಲೆನ್ಸ್ ವಾಹನವನ್ನು ಕೊಡುಗೆಯಾಗಿ ಹಸ್ತಾಂತರಿಸಿತು.
ಇಲಾಖೆಯ ಪರವಾಗಿ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆರವರು ಸ್ವೀಕರಿಸಿ ಜೈವಿಕ ಉದ್ಯಾನವನದ ಕಾರ್ಯ ನಿರ್ವಾಹಕ ನಿರ್ದೇಶಕ ಸೂರ್ಯ ಸೇನ್ ಐ. ಎಫ್.ಎಸ್ ರಿಗೆ ಹಸ್ತಾಂತರಿಸಿದರು.
ಜೈವಿಕ ಉಧ್ಯಾನವದ ಸಿಬ್ಬಂದಿ ಮತ್ತು ಪ್ರವಾಸಿಗರಿಗೆ ತುರ್ತು ಆರೋಗ್ಯ ಸೇವೆಯ ಅಗತ್ಯವಿದ್ದಾಗ ಆಸ್ಪತ್ರೆಗೆ ಕರೆತರಲು ಆಂಬ್ಯುಲೆನ್ಸ್ ಅಗತ್ಯವನ್ನು ಮನಗಂಡು ಕಾವೇರಿ ಆಸ್ಪತ್ರೆ ಸಮೂಹವು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಕೊಡುಗೆ ನೀಡಿದೆ.
ಈ ಸಂದರ್ಭದಲ್ಲಿ ಕಾವೇರಿ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ವಿಜಯಭಾಸ್ಕರನ್, ಉಪಾದ್ಯಕ್ಷ ವಿಲ್ಫೆರ್ಡ್ ಸ್ಯಾಮ್ಸನ್, ಕುಲಕರ್ಣಿ, ವಲಯ ಅರಣ್ಯಾಧಿಕಾರಿಗಳು, ಬನ್ನೇರುಘಟ್ಟ ಜೈವಿಕ ಉದ್ಯಾನವನ, ಮತ್ತಿತರು ಉಪಸ್ಥಿತರಿದ್ದರು.
