ಹೆಂಡತಿಯ ಶೀಲ ಶಂಕಿಸಿ ಇರಿದು ಕೊಂದ ಗಂಡ.
1 min readಹೆಂಡತಿಯ ಶೀಲ ಶಂಕಿಸಿ ಇರಿದು ಕೊಂದ ಗಂಡ
ಆನೇಕಲ್: ಪತ್ನಿಯ ಶೀಲ ಶಂಕಿಸಿ ಬೀದಿಯಲ್ಲೇ ಇರಿದು ಕೊಂದ ಘಟನೆ ಹೆಬ್ಬಗೋಡಿ ರಾಮಯ್ಯ ಬಡಾವಣೆಯಲ್ಲಿ ಬೆಳಗ್ಗೆ ನಡೆದಿದೆ.
ತಿರುಪಾಳ್ಯ ಮೂಲದ 27 ವರ್ಷದ ಗಂಗಾ ಕೊಲೆಯಾದ ಪತ್ನಿ. ಬೆಳಗ್ಗೆ ಗಂಡ ಮೋಹನ್ ರಾಜ್ ಹೆಂಡತಿಯೊಂದಿಗೆ ಶೀಲ ಶಂಕೆ ವಿಚಾರಕ್ಕೆ ಖ್ಯಾತೆ ತೆಗೆದಿದ್ದು ಮಾತಿನ ಭರಾಟೆ ಜೋರಾಗಿ ಕೊಲೆಯಲ್ಲಿ ಅಂತ್ಯವಾಗಿದೆ.
ದಿನಾ ಇದೇ ವಿಚಾರಕ್ಕೆ ಜಗಳ ನಡೆಯುತ್ತಿದ್ದು ಇಡೀ ಗ್ರಾಮದ ಮನೆ ಮಾತಾದ ಜಗಳಕ್ಕೆ ಇಡೀ ಊರು ಸಾಕ್ಷಿಯಾಗಿತ್ತು.
ಇಂದು ಜಗಳ ತಾರಕಕ್ಕೇರಿ ಬೀದಿ ರಂಪಾಟವಾಗಿ ಚಾಕುವಿನಿಂದ ಹೆಂಡತಿಯ ಹೊಟ್ಟೆಗೆ ಮೂರ್ನಾಲ್ಕು ಬಾರಿ ಇರಿದು ಕ್ರೌರ್ಯ ಮೆರೆದಿದ್ದಾನೆ.
ಇರಿತಕ್ಕೊಳಗಾದ ಗಂಗಾಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಯಲ್ಲಿ ಕೊನೆಗೆ ಕೊನೆಯುಸಿರೆಳೆದಿದ್ದಾಳೆ.
ಸದ್ಯಕ್ಕೆ ಸ್ಥಳಕ್ಕಾಗಮಿಸಿದ್ದ ಹೆಬ್ಬಗೋಡಿ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಗಂಡ ಮೋಹನ್ ರಾಜ್ ಙ್ನು ವಶಕ್ಕೆ ಪಡೆದಿದ್ದಾರೆ.
