ವಕೀಲೆಗೆ ಲೈಂಗಿಕ ಕಿರುಕುಳ ಆರೋಪ – ಐಟಿ ಅಧಿಕಾರಿ ವಿರುದ್ಧ ಎಫ್‍ಐಆರ್
1 min read
ಬೆಂಗಳೂರು: ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ (Sexual Harassment) ಎಸಗಿದ ಆರೋಪದ ಮೇಲೆ ನಗರದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ (IT Officer) ವಿರುದ್ಧ ಎಫ್‍ಐಆರ್ (FIR) ದಾಖಲಾಗಿದೆ.
ಐಟಿ ಅಧಿಕಾರಿ ವರುಣ್ ಮಲ್ಲಿಕ್ ಲೈಂಗಿಕ ಕಿರುಕುಳ ನೀಡಿದ್ದಾರೆ. ಅಲ್ಲದೇ ಹಲ್ಲೆ ನಡೆಸಿದ್ದಾರೆ ಎಂದು ವಕೀಲೆಯೊಬ್ಬರು ಆರೋಪಿಸಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಆರೋಪಿಗೆ ಪೊಲೀಸರು 2 ನೋಟಿಸ್ ನೀಡಿದ್ದಾರೆ.
